Saturday, August 24, 2013


Here is a song/lyric with the mix of Kannada, English and Telugu, set to a tune. The song is filled with pride, irrefutable truth and sarcasm.

ನಮ್ಮ ಊರು ಚಿಂತಾಮಣಿ 
ನಮ್ಮೂರಲ್ಲಿ ಎಲ್ರೂ ಧಣಿ 
ಹೇಳೋರ್ ಕೇಳೋರ್ ಯಾರು ಇಲ್ಲ 
ನಾವ್ ನಡಸಿದಂತೆ ಇಲ್ಲಿ ಎಲ್ಲ
 ಆದ್ರೇ ...
ಸೀದಾ ಸಾದಾ ಜನ ನಾವು ಸಿಕ್ಕಾಪಟ್ಟೆ ಒಳ್ಳೇವ್ರು ನಾವು 
                        ನಮ್ಮ ಊರು ಚಿಂತಾಮಣಿ ...... 


ಎದ್ವ-ತದ್ವ ನಾವು ಗಾಡಿಯನ್ನು ಓಡಿಸಿ 
ಅಡ್ಡ-ದಿಡ್ಡಿ ಗಾಡಿ ಎಲ್ಲಂದ್ರಲ್ಲೇ ನಿಲ್ಲಿಸಿ 
ಇಲ್ವೆ ಇಲ್ಲ ಇಲ್ಲಿ oneway ಎಂಬ policy 
ಮುಂಚಿನಿಂದ ಅಲವಾಟ್ ಇಲ್ಲ traffic rules ಪಾಲಿಸಿ 
wrong-side ಅಲ್ಲಿ ದೂರು 
ನಮಗೆ ಅಡ್ಡ ಬರೌರ್ ಯಾರು?
ಸುಮ್ -ಸುಮ್ನೆ horn ಹೊಡೆದು ಹಾಕ್ತೀವ್ ನಾವು top gearಉ 
                         
                        ನಮ್ಮ ಊರು ಚಿಂತಾಮಣಿ ...... 

ಸಿನಿಮಾಗಿಲ್ಲಿ ಆದರ್ಶ,SLN , ಅಂಜನಿ 
ತೆಲುಗು ಫಿಲಂ ಚೂಸ್ತಾಮು ಎನಬೈ ರುಪಾಯ್ಲು ಬಾಲ್ಕನಿ 
ಚಕ್ಕಲಿ-ನಿಪ್ಪಟ್ ಆನಿಯನ್ ಟೊಮೇಟೊ ಕಾರ ಪುರಿ 
ತಿಂದದ್ದು ಹೆಚ್ಚಾದ್ರೆ lime soda ನನ್ನಾರಿ 
ಪೆಗ್ಗು ಯಾರಿಗ್ ಬೇಕು!!
ಪೆರಗ್-ಬೂಂಧಿ ಇದ್ರೆ ಸಾಕು 
Pub Mall ಬೇಕಾಗಿಲ್ಲ simple ಮಂದಿ ನಾವುಗ್ಳೆಲ್ಲ 

                        ನಮ್ಮ ಊರು ಚಿಂತಾಮಣಿ ...... 

ಕರೆಂಟ್ ನವರು ಆಡಿಸ್ತಾರೆ ಕಣ್ಣಾ ಮುಚ್ಚಾಲೆ ಆಟ 
ಗ್ಯಾಸು ನೀರಿಗಂತು ತಪ್ಪಲ್ಲ ಪರದಾಟ 
ಆ ಕಾರ್ಡು, ಈ ಕಾರ್ಡು, ಏನ್ ಹೇಳ್ಲಿ ನಮ್ಮ ಪಾಡು 
ಬದುಕಿದ್ದಾಗಲೇ ನಮಗೆ ತೋರಿಸ್ತಾರೆ grave yardಉ 
ಸರ್ಕಾರ ಕೊಡುವ ನೋವು 
ಅದ್ರಲ್  ಶ್ಯಾನೆ ಬಿಜಿ ನಾವು 
systemಗೊಂದು salute ಹೊಡೆದು ಮುಂದೆ ಸಾಗೊ ಜನ ನಾವು 

                         ನಮ್ಮ ಊರು ಚಿಂತಾಮಣಿ ...... 

ಘಂಟಸಾಲ ಪಾಟಲಿಕಿ ಸೂರ್ಯಡು ಕೂಡ wakingಉ 
ರಾತ್ರಿಯಲಿ ಬೆಟ್ಟದಡಿ starsಗಳ partyingಉ 
ಸಕ್ಕತ್ತು ಸೂಪರ್ರು ಬೆಟ್ಟ ಗುಡ್ಡಗಳ ಸಾಲು 
ಇನ್ನೆಷ್ಟು ಹೇಳ್ಬೇಕು ಇನ್ನು ಬೇಕ ನಾಕು ಸಾಲು 
                                 -ಅಯ್ಯೋ ಇಂತೈತೆ ನಾಕು ಸಾಲು!!
ಕಣ್ಣು ಬಿಟ್ರೆ ಕೊಂಚ 
ಇದು lovely ಪ್ರಪಂಚ 
ಎಷ್ಟಾದ್ರೂನು ಬಿಟ್ಕೊಡಲ್ಲ Chintamaniacಸು ನಾವು 

                           ನಮ್ಮ ಊರು ಚಿಂತಾಮಣಿ ......